ನಮ್ಮ ಜೀವನದಲ್ಲಿ ಸ್ವಾಭಿಮಾನ ಎಷ್ಟು ಮುಖ್ಯ ಎಂದರೆ ಕೆಲವೊಮ್ಮೆ ನಾವು ಸ್ವಾಭಿಮಾನದಿಂದ ಇಲ್ಲದಿದ್ದರೆ ನಮ್ಮನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಾರೆ ಈ ಜನ ಹಾಗಾಗಿ ಈ ಅತ್ತು ತತ್ವಗಳನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ತೊಡಗಿಸಿಕೊಂಡರೆ ನೀವು ಎಂದಿಗೂ ತಲೆಯೆತ್ತಿ ನಡೆಯಬಹುದು.
1) ಜೀವನದಲ್ಲಿ ಏನೇ ಆದರೂ ನಾನು ಮೋಸ ಮಾಡಲ್ಲ ಎನ್ನುವವರೇ, ಜೀವನದಲ್ಲಿ ಎಲ್ಲರಿಂದಲೂ ಮೋಸಕ್ಕೆ ಒಳಗಾಗುತ್ತಾರೆ.
2)ಯಾರು ಬಂದರೆ ಏನು ಯಾರು ತಿಂದರೆ ಏನು ಅಂತ ಉದಾಸೀನ ಮಾಡುವವನೇ ಈಗಿನ ಪ್ರಸ್ತುತ ಪ್ರಪಂಚದಲ್ಲಿ ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗುತ್ತಾನೆ.
3) ನೀನು ಯಾರಲ್ಲೂ ಏನನ್ನು ನಿರೀಕ್ಷಿಸಬೇಡ ಏಕೆಂದರೆ ನಿನ್ನಲ್ಲಿ ನಿರೀಕ್ಷೆ ಇದ್ದಷ್ಟು ಪರೀಕ್ಷೆಗಳೇ ಹೆಚ್ಚು.
4) ಎಲ್ಲರೂ ಚೆನ್ನಾಗಿರಬೇಕು ಎಂದು ಹಾರೈಸುವ ಮೊದಲು ನಾನು ಚೆನ್ನಾಗಿರುತ್ತೇನೆ ಎಂಬ ನಿರ್ಧಾರ ಮಾಡು ಏಕೆಂದರೆ ಇಲ್ಲಿ ನೀನು ಚೆನ್ನಾಗಿದ್ದರೆ ನಿನಗೆ ಅವನು ಚೆನ್ನಾಗಿದ್ದರೆ ಅವನಿಗೆ.
5) ನನ್ನವರು ಎಂದರೆ ನಿನ್ನ ಕೊನೆ ಪಯಣದವರೆಗೂ ನಿನ್ನ ಜೊತೆ ಇರುತ್ತಾರೆ ಎಂಬ ಭ್ರಮೆಯಲ್ಲಿ ಇರಬೇಡ ಇಲ್ಲಿ ಬರುವುದು ನಾನು ಎಂಬ ನಾವೇ ಹೊರತು ನನ್ನವರು ಎಂಬ ಯಾವ ಸಂಬಂಧವೂ ಅಲ್ಲ.
6) ಎಲ್ಲಿವರೆಗೂ ನೀನು ನಿನ್ನ ಮಾತನ್ನು ಕೇಳದೆ ಬೇರೆಯವರ ಮಾತಿಗೆ ಮನ್ನಣೆ ಕೊಡುತ್ತೆಯೋ ಅಲ್ಲಿಯವರೆಗೂ ನಿನ್ನ ಜೀವನದಲ್ಲಿ ಸಾಸುವೆ ಅಷ್ಟು ಬದಲಾವಣೆಯನ್ನು ನೋಡಲು ಸಾಧ್ಯವಿಲ್ಲ.
7) ಬೇರೆಯವರ ಪ್ರೀತಿಗೆ ಬೆಲೆ ಕೊಡಬೇಕೆ ಹೊರತು ಅವರ ಮಾತಿಗಲ್ಲ.
8) ಎಲ್ಲರೂ ಏನು ಅಂದುಕೊಳ್ಳುತ್ತಾರೋ ಎಂದು ಬದುಕುವ ಬದಲು ನಾನು ಏನು ಅಂದುಕೊಳ್ಳಲ್ಲ ಎಂದು ಬದುಕು ಆಗ ನೀನು ಬದುಕುತ್ತೀಯಾ.
9) ಯಾರ ಸಹಾಯವನ್ನು ಮರೆತು ಕನಸಿನಲ್ಲೂ ಕೇಳಬೇಡ ನೀನು ಸಹಾಯ ಪಡೆದ ದಿನದಿಂದ ನಿನಗೆ ಕನಸು ಕೂಡ ಬೀಳುವುದು ನಿಂತು ಹೋಗುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Pls do not enter any spam link in the coment box