ಶ್ರೀ ಲಕ್ಷ್ಮೀ ಶೋಭನ ಪದ ರಮೆಗೆ ನಾರಾಯಣನಿತ್ತ ಜಯದ ಯೋಶೋ ಗೀತೆ . ಇದನ್ನು ನಿತ್ಯ ಭಜಿಸುವ ಸುಜನರಿಗೆ ಸರ್ವತ್ರ ಜಯವೀವ ಮಂಗಳ ಗೀತೆ. ವಿಶೇಷವಾಗಿ ಉಡುಪಿಯ ಅಷ್ಟ ಮಠ ಗಳಲ್ಲಿ ನಿತ್ಯ ಪಠಿಸುವ ಪಾವನ ಗೀತೆ. ಇಂದಿಗೂ ಮನೆ ಮನೆಗಳಲ್ಲಿ ಸುಮಂಗಲೆ ಯರು ತಪ್ಪದೆ ಹಾಡುತ್ತಿರುವ ಮಧುರ ಗೀತೆ. ಲಕ್ಷ್ಮಿಯನ್ನು ಮಾತ್ರ ಧ್ಯಾನಿಸು ವುದು ಶಾಸ್ತ್ರ ನಿಷಿದ್ಧ. ಲಕ್ಷ್ಮಿಯ ಜೊತೆಗೆ ನಾರಾಯಣ ನನ್ನು ತಪ್ಪದೆ ಧ್ಯಾನಿಸಬೇಕು. ವಧೂ... ವರರಿಗೆ , ಪತಿ ಪತ್ನಿ ಯರಿಗೆ ಬರುವ ಯಾವುದೇ ಕಂಟಕವಿದ್ದರೂ, ಗ್ರಹಗಳ ದೋಷವಿದ್ದರೂ ಮನಸ್ತಾಪ ಗಳು ಇದ್ದರೂ ಮನೆಯಲ್ಲಿ ಇರುವ ಹಿರಿಯರು ಈ ಹಾಡನ್ನು ಹಾಡಿ ಹರಸಿದರೆ ಪರಿಹಾರ ನಿಶ್ಚಯ . ಶ್ರೀ ವಾದಿ ರಾಜರೇ ಈ ಕೃತಿಯ ಕೊನೆ ಯಲ್ಲಿ.. ಮದುವೆ ಮನೆಯಲ್ಲಿ ಈ ಪದವ ಪಾಡಿದರೆ l ಮಧು ಮಕ್ಕಳಿಗೆ ಮುದವಹುದು l ವಧುಗಳಿಗೆ ವಾಲೆಭಾಗ್ಯ ದಿನದಿನಕ್ಕೆ ಹೆಚ್ಚುವುದು l ಮದನನ ನಯ್ಯನ ಕೃಪೆಯಿಂದ l lಎಂದು ಹಾಡಿದ್ದಾರೆ. ಇದನ್ನು ಪ್ರಾರಂಭ ಮಾಡುವ ಮೊದಲು , ಇದನ್ನು ರಾಜರು ಯಾವ ಸಂದರ್ಭದಲ್ಲಿ ಮಾಡಿದರು ಸ್ವಲ್ಪ ನೋಡೋಣ. ರಾಜರು ಸಂಚರಿಸುತ್ತಾ ಒಂದು ಊರಿಗೆ ಬಂದರು. ಅಲ್ಲಿ ಇರುವ ದೇವಸ್ಥಾನದಲ್ಲಿ ಸಂಸ್ಥಾನ ಪೂಜೆ ನಡೆಯುತಿತ್ತು. ಆ ದಿನವೇ ಆ ಊರಿನ ಅರಸಪ್ಪ ನಾಯಕನ ಮನೆಯಲ್ಲಿ ಮಗನ ವಿವಾಹವು ಸಂಭ್ರಮದಿಂದ ಜರುಗುತಿತ್ತು. ಪುರೋಹಿತರು ಸಪ್ತಪದಿ ಯನ್ನು ಮಾಡಿಸತೊಡ ಗಿದಾಗ ಮದು ಮಗನ ಬಾಸಿಂಗ ದೊಳಗೆ ಒಂದು ವಿಷ ಸರ್ಪವು ಸೇರಿ ಕೊಂಡು ಆ ವರನನ್ನು ಕಚ್ಚಿದಾಗ ಅವನಿಗೆ ಅಪಮೃತ್ಯು ಬರಲು, ಸಂಭ್ರಮದಲ್ಲಿದ್ದ ಮದುವೆ ಮನೆಯ ವಾತಾವರಣ ಕ್ಷಣದೊಳಗೆ ಮಸಣದ ಗೂಡಾಯಿತು. ಅರಸಪ್ಪ ನಾಯಕನಿಗೆ ಮತ್ತು ಮನೆಯವ ರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಏನೂ ತೋಚದೇ ಕುಳಿತಾಗ ಅಲ್ಲಿನ ಹಿರಿಯರೊಬ್ಬರು .. ಇಂದು ನಮ್ಮೂರಿಗೆ ದೊಡ್ಡ ತಪಸ್ವಿಗಳು ಬಂದಿದ್ದಾರೆ. ದೇವಸ್ಥಾನದಲ್ಲಿ ಸಂಸ್ಥಾನ ಪೂಜೆ ನಡೆಯುತ್ತಿದೆ. ಅವರನ್ನು ಮೊರೆ ಹೋದರೆ ದುಃಖ ನಿವಾರಿಸಬಹುದು ಎಂದು ಹೇಳಿದಾಗ ಎಲ್ಲರೂ ಹೋಗಿ ರಾಜರ ಪಾದಗಳಲ್ಲಿ ಬಿದ್ದು ಹೊರಳಾಡಿದರು. ಹಿಂದಿನ ದಿನವೇ ರಾಜರಿಗೆ ಶ್ರೀದೇವಿಯು ತನ್ನ ವಿವಾಹದ ಮಂಗಲವನ್ನು ಹಾಡಲು ಸೂಚಿಸಿದ್ದಳು. ರಾಜರು ಶ್ರೀ ಲಕ್ಷ್ಮೀ ದೇವಿಯ ಮಹಿಮೆಯನ್ನು ಕೊಂಡಾಡಿ ದರು. ತಕ್ಷಣವೇ ವರನನ್ನು ಕರೆತರಲು ಹೇಳಿ ಪರಮ ಮಂಗಳವಾದ ಶ್ರೀ ಲಕ್ಷ್ಮೀ ಶೋಭಾನ ಪದವನ್ನು ತಾಳ ಲಯ ಬದ್ದವಾಗಿ ಹಾಡಲು ಆ ವರನ ದೇಹದಲ್ಲಿ ಇದ್ದ ಸರ್ಪದ ವಿಷವು ಅಳಿದು , ಅವನು ನಿದ್ರೆಯಿಂದ ಎಚ್ಚತ್ತವ ನಂತೆ ಎದ್ದು ಕುಳಿತನು. ನಂತರ ಮದುವೆಯ ಮಂಗಳ ಕಾರ್ಯ ವನ್ನು ನೆರವೇರಿಸಿದರು. ಕಲಿಯುಗದಲ್ಲಿ ಯಾವಾಗ ಏನಾಗುವುದೋ ಹೇಳಲು ಸಾಧ್ಯವಿಲ್ಲ. ನಮಗೆ ಗುರುಗಳ ಹಾಗೂ ದೈವಾನುಗ್ರಹ ಸದಾ ಇರಬೇಕು. ಅದಕ್ಕೆ ದಾಸರು ಹೇಳುತ್ತಾರೆ .ಹರಿ ನೀ ಒಲಿದರೆ .. ಯಾರು ಮುನಿದು ಏನು ಮಾಡುವರೋ ಅಂತ .
ಸಿರಿಯರಸ ಹಯವದನನ ಪ್ರಿಯರಾದ ಶ್ರೀ ವಾದಿರಾಜರು ರಚಿಸಿದ ಪದ ... ಶ್ರೀ ಲಕ್ಷ್ಮೀ ಶೋಭನ ಪದ.. ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀಕಾಂತನ ಕಂದನೆನಿಸಿದ ಸಂತರ ಮೆಚ್ಚಿನ ವಾದಿ ರಾಜರ ಮುನಿ ಪಂಥದಿ ಪೇಳಿದ ಪದವಿದು. ರಾಜರು ಸ್ವಪ್ನದಲ್ಲಿ ಕಂಡ ಅಪೌರುಷೇಯ ವೇದತುಲ್ಯ ಮಂತ್ರ. ವೇದ ಸಂಸ್ಕೃತದಲ್ಲಿ ಇದೆ. ಶ್ರೀ ಲಕ್ಷ್ಮೀ ಶೋಭನ ಪದ ಕನ್ನಡದಲ್ಲಿ ಇದೆ. ಇಷ್ಟೇ ವ್ಯತ್ಯಾಸ. ಶ್ರೀ ಹರಿ ವಾಯು ಸ್ತುತಿಯಂತೆ ಪುನಶ್ಚರಣೆಕ್ಕೆ ಯೋಗ್ಯವಾದ ದಿವ್ಯ ಮಂತ್ರ. ಸ್ತ್ರೀ ಪುರುಷ ರೆನ್ನದೆ ಎಲ್ಲ ಭಗವದ್ ಭಕ್ತರು ಜಪಿಸಬಹುದಾದ ಮಹಾ ಮಂತ್ರ. ಮಂತ್ರ ಅಂದರೆ ಮನನ ದಿಂದ ತ್ರಾಣವನ್ನು ಅಂದರೆ ರಕ್ಷಣೆಯನ್ನು ನೀಡು ವಂತದ್ದು. ಇದರಲ್ಲಿ ತಿಳಿದಷ್ಟು ಅರ್ಥ ಇದೆ. ಮನನ ಮಾಡಿ ದಷ್ಟೂ ಅರ್ಥ ವಿಸ್ತಾರ. ಇದು ಸಕಲ ವೇದಾರ್ಥಸಾರ. ಸಕಲ ಪುರಾಣಗಳ ಇತಿಹಾಸ ಹಾಗೂ ಉಪದೇಶಗಳನ್ನೆಲ್ಲ ಭಟ್ಟಿ ಇಳಿಸಿ, ದಿವ್ಯ ರಸಪಾಕ ಮಾಡಿ ಪಾಮರರಿಗೂ ಸುಲಭ ವಾಗಿ ತಿಳಿಯುವಂತೆ ಸರಳ ಶೈಲಿಯಲ್ಲಿ , ರಸ ಭಾವಗಳನ್ನು ಹೊಳೆಹೊಳೆಯಾಗಿ ಹರಿಸು ವಂತ ಸವಿ ನುಡಿಯಲ್ಲಿ ಪರಮ ಮಂಗಳಕರವಾದ ದೇವಿ ಸರ್ವ ಮಂಗಳೆಯ ವಿವಾಹ ಮಂಗಲದ ವೈಭವವನ್ನು ಮನ ಮುಟ್ಟುವಂತೆ ಬಣ್ಣಿಸಿದ ಪುಟ್ಟ ದಿಟ್ಟ ಕೃತಿ ಇದು. ಮದುವೆ ಮನೆಯಲ್ಲಿ ಮುತೈದೆಯರು ಮುದದಿಂದ ಹಾಡುವ ಹಾಡು. ಮದು ಮಕ್ಕಳಿಗೆ ಮುದ ನೀಡುವ ಹಾಡು. ಆಯುಷ್ಯ ಭವಿಷ್ಯ ಗಳನ್ನು ಬೆಳೆಸುವ ಹಾಡು. ಈಗಿನ ಕಾಲದ ಯಾಂತ್ರಿಕತೆಯ ಪರಿಸ್ಥಿತಿಯಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಯಿಂದ ಪ್ರೀತಿಯಿಂದ ಜೀವನ ಸಾಗುವುದು ಬಹಳ ಕಷ್ಟ ವಾಗಿದೆ. ಬೆಳಗಿನ ಸೂರ್ಯನ ಉದಯದಿಂದ ಸೂರ್ಯಾಸ್ತಮ ದವರೆಗೆ ಮನಃಸ್ತಾಪಗಳ, ಅಸಮಾಧಾನದ ಮದ್ಯೆ ಕಾಲ ಕಳೆಯ ಬೇಕಾಗಿದೆ. ಇದರ ಮಧ್ಯೆ ತಾಳ್ಮೆ ಇಲ್ಲದೆ ಹೋದರೆ ಕೊನೆಗೆ ನಾನೊಂದು ತೀರ .. ನೀನೊಂದು ತೀರ ಆಗುತ್ತೆ. ಹುಟ್ಟಿದ ಮಕ್ಕಳು ಪ್ರೀತಿಯ ಕಾಣದೆ ತಬ್ಬಲಿ ಯಾಗುತ್ತವೆ. ಆಮೇಲೆ ಕೋರ್ಟ್ ಕಚೇರಿ ಅಂತ ಅಲಿಯ ಬೇಕಾಗುತ್ತೆ. ಇದಕ್ಕೆಲ್ಲ ಮದ್ದು ಅಂದರೆ ನಮ್ಮ ರಾಜರು ಮಾಡಿರುವ ... ಶ್ರೀ ಲಕ್ಷ್ಮೀ ಶೋಭನ ಪದ. ದಿನ ನಿತ್ಯ ಒಂದು ಬಾರಿ ಓದಿ ಇಬ್ಬರೂ, ಆಗ ನೋಡಿ ಹೊಂದಾಣಿಕೆಯ ಬೆಸುಗೆ ಹಾಕುತ್ತಾರೆ ನಮ್ಮ ಶ್ರೀ ವಾದಿರಾಜರು. ಇದು ಸತ್ಯವಾದ ಮಾತು. ಭಜಿಸುವ ಜನರಿಗೆ ಸರ್ವತ್ರ ಜಯವೀವ ಮಂಗಳ ಗೀತೆ ಇದು. ನಾರಾಯಣನ ಜೊತೆ ಲಕ್ಷ್ಮಿಯನ್ನು ಧ್ಯಾನಿಸಿ ಹಾಡಿದರೆ ಲಕ್ಷ್ಮೀನಾರಾಯಣರು ಪ್ರಸನ್ನರಾಗುವುದು ನಿಶ್ಚಿತ. ಆಯುಷ್ಯ, ಪ್ರೀತಿ, ಬಾಂಧವ್ಯ ಗಳ ಬೆಳೆಸುವ ಪದ. ಅಷ್ಟೇ ಅಲ್ಲ ನಿರ್ದುಖ ಮೋಕ್ಷಾನಂದವನ್ನೂ ತಂದು ಕೊಡಿಸುವ ಹಾಡು ಇದು. ರಾಜರ ಮೇಲೆ ವಿಶ್ವಾಸ ವಿಡಿ. ಮತ್ತೆ ನಾಳೆ ನೋಡೋಣ. ನಮ್ಮ ಆತ್ಮೀಯರು ಹೇಳಿದರು ಪ್ರೀತಿಯ ಕೋಪದಿಂದ .. ನೀವು ಯಾವುದು ಮುಗಿಸುವುದೇ ಇಲ್ಲ ಅಂತ... ಖಂಡಿತ ಇನ್ನೂ ಮುಂದೆ ಹಾಗೆ ಮಾಡದ ಹಾಗೆ ಮಾಡು ಅಂತ ಹರಿ ವಾಯು ರಾಯರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Pls do not enter any spam link in the coment box