MANIDWEEPA VARNANE IN KANNADA | MANIDWEEPA VARNANE LIRICS


ಮಣಿದ್ವೀಪ ವರ್ಣನೆ (ಕನ್ನಡ ಅನುವಾದ )

 ಮಹಾ ಶಕ್ತಿ ಮಣಿದ್ವೀಪ ನಿವಾಸಿನಿ
ಮೂರು ಲೋಕಕ್ಕೆ ಮೂಲ ಪ್ರಕಾಶಿನಿ
ಮಣಿ ದ್ವೀಪದಲಿ ಮಂತ್ರ ರೂಪಿಣಿ
ಮನಮನದಲ್ಲೂ ನೆಲೆಯಾಗಿಹಳು(1)

 ಸುಗಂಧ ಪುಷ್ಪಗಳೆಷ್ಟೋ ಸಾವಿರ
 ಅನಂತ ಸುಂದರ ಸುವರ್ಣ ಹೂಗಳು
 ನಿಶ್ಚಲವಾದ ಮನೋ ಸುಖಗಳು
 ಈ ಮಣಿ ದ್ವೀಪಕೆ ಮಹಾನಿಧಿಗಳು (2)

 ಲಕ್ಷ ಲಕ್ಷಗಳ ಲಾವಣ್ಯಗಳು
 ಅಕ್ಷರ ಲಕ್ಷ ವಾಕ್ ಸಂಪದಗಳು
 ಲಕ್ಷ ಲಕ್ಷಗಳ ಲಕ್ಷ್ಮೀನಾಥರು
 ಈ ಮಣಿ ದ್ವೀಪಕೆ ಮಹಾನಿಧಿಗಳು (3)

 ಪಾರಿಜಾತವನ ಸೌಗಂಧಗಳು
 ಸುರಾಧಿನಾದರ ಸತ್ಸಂಗಗಳು
ಗಂಧರ್ವಾದಿ ಗಾನ ಸ್ವರಗಳು
 ಈ ಮಣಿ ದ್ವೀಪಕೆ ಮಹಾನಿಧಿಗಳು (4)

 ಪದ್ಮರಾಗಗಳು ಸುವರ್ಣ ಮಣಿಗಳು
 ಹತ್ತಲವಾರು ಉದ್ದಕ್ಕೆ ಹಬ್ಬಿದೆ
 ಮಧುರ ಮಧುರದ ಚಂದನ ಸುಧೆಗಳು
 ಈ ಮಣಿ ದ್ವೀಪಕ್ಕೆ ಮಹಾನಿಧಿಗಳು (5)

 ಅರವತ್ನಾಲ್ಕು ಕಲಾವಿದ್ಯೆಗಳು
ವರಗಳ ನೀವೆ ಹದಿನಾರು ಶಕ್ತಿಯು
ಪಂಚ ಬ್ರಹ್ಮರ ಪರಿವಾರಗಳು
 ಈ ಮಣಿ ದ್ವೀಪಕೆ ಮಹಾನಿಧಿಗಳು (6)

 ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿ ದ್ವೀಪವು
ದೇವದೇವರ ನಿವಾಸವು
ಇದುವೇ ನಮ್ಮ ಕೈವಲ್ಯವೂ (7)

 ಅಷ್ಟಸಿದ್ದಿಗಳು ನವನವ ನಿಧಿಗಳು
ಅಷ್ಟ ದಿಕ್ಕುಗಳ ದಿಕ್ಪಾಲಕರು
ಸೃಷ್ಟಿಕರ್ತರು ಸುರಲೋಕಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (8)

 ಕೋಟಿ ಸೂರ್ಯರ ಪ್ರಚಂಡ ಕಾಂತಿಯು
ಕೋಟಿ ಚಂದ್ರರ ತಂಪಿನ ಬೆಳಕು
ಕೋಟಿ ತಾರೆಯರ ಮಿನುಗುವ ಮಿಂಚು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (9)

 ಕಂಚು ಗೋಡೆಗಳ ಪ್ರಾಕಾರಗಳು 
ತಾಮ್ರ ಗೋಡೆಗಳ ಚತುರಸ್ತ್ರಗಳು
 ಸಪ್ತಸ್ವರದ ರತ್ನಮಾಲೆಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (10)

 ಇಂದ್ರ ನೀಲಮಣಿಯಾಭರಣಗಳು
ವಜ್ರಕೋಟೆಗಳ ವೈಡೂರ್ಯಗಳು
 ಪುಷ್ಪರಾಗಮಣಿ ಪ್ರಾಕಾರಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (11)

 ಸಪ್ತ ಕೋಟಿ ಘನ ಮಂತ್ರ ವಿದ್ಯೆಯು
ಸರ್ವ ಶುಭಪ್ರದ ಇಚ್ಛಾ ಶಕ್ತಿಯು
 ಶ್ರೀ ಗಾಯತ್ರಿ ಜ್ಞಾನ ಶಕ್ತಿಯು
ಈ ಮಣಿದ್ವಿಪಕ್ಕೆ ಮಹಾನಿಧಿಗಳು (12)

ಫಳ ಫಳ ಹೊಳೆವ ಮುತ್ತಿನ ರಾಶಿ
 ಥಳ ಥಳ ಹೊಳೆವ ಚಂದ್ರಕಾಂತಿಯು
ವಿದ್ಯುಲತೆಗಳು ಮರಕತ ಮಣಿಗಳು
 ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (13)

 ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವಿಪವು
ದೇವದೇವರ ನಿವಾಸವು
ಇದುವೇ ನಮ್ಮ ಕೈವಲ್ಯವು (14)

 ಕುಬೇರ ಇಂದ್ರ ವರುಣ ದೇವರು
ಶುಭಗಳನೀವೆ ಅಗ್ನಿವಾಯುಗಳು
 ಭೂಮಿ ಗಣಪತಿ ಪರಿವಾರಗಳು
 ಈ ಮಣಿ ದ್ವಿಪಕೆ ಮಹಾನಿಧಿಗಳು (15)

 ಭಕ್ತಿ ಜ್ಞಾನ ವೈರಾಗ್ಯಸಿದ್ಧಿಯು
 ಪಂಚಭೂತಗಳು ಪಂಚ ಶಕ್ತಿಯು
 ಸಪ್ತಋಷಿಗಳು ನವಗ್ರಹಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (16)

 ಕಸ್ತೂರಿ ಮಲ್ಲಿಗೆ ಜಾಜಿ ವನಗಳು
ಸೂರ್ಯಕಾಂತಿ ಶಿಲೆ ಮಹಾಗೃಹಗಳು 
ಆರು ಋತುಗಳು, ಚತುರ್ವೇದಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (17)

 ಮಂತ್ರಿಣಿ ದಂಡಿನಿಶಕ್ತಿ ಸೇನೆಯು
ಕಾಳಿ ಕರಾಳಿ ಸೇನಾಧಿಪತಿಗಳು
ಮೂವತ್ತೇರಡು ಮಹಾ ಶಕ್ತಿಗಳು
 ಈ ಮಣಿ ದ್ವೀಪಕೆ ಮಹಾನಿದಿಗಳು (18)

 ಸುವರ್ಣ ರಜಿತಾ ಸುಂದರ ಗಿರಿಗಳು
ಅನಂತ ದೇವಿ ಪರಿಚಾರಕಿಯರು
 ಗೋಮೇದಿಕ ಮಣಿ ನಿರ್ಮಿತ ಗೃಹಗಳು
ಈ ಮಣಿ ದ್ವಿಪಕ್ಕೆ ಮಹಾ ನಿಧಿಗಳು (19)

 ಸಪ್ತ ಸಮುದ್ರಾನಂತ ಗಿರಿಗಳು
 ಯಕ್ಷಕಿನ್ನರಾ ಕಿಂ ಪುರುಷಾದಿ
 ನಾನಾಲೋಕ ನದೀನದಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (20)

ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವಿಪವು
ದೇವದೇವರ ನಿವಾಸವು
ಇದುವೇ ನಮ್ಮ ಕೈವಲ್ಯವು (21)

 ಮಾನವ ಮಾಧವ ದೇವ ಗಣಗಳು
ಕಾಮಧೇನುವು ಕಲ್ಪತರುಗಳು
 ಸೃಷ್ಟಿ ಸ್ಥಿತಿಲಯ ಕಾರಣಕರ್ತರು
 ಈ ಮಣಿ ದ್ವಿಪಕೆ ಮಹಾನ್ ನಿಧಿಗಳು (22)

 ಕೋಟಿ ಪ್ರಕೃತಿಯ ಸೌಂದರ್ಯಗಳು
 ಸಕಲ ವೇದಗಳು ಉಪನಿಷತ್ತುಗಳು
 16 ದಳದ ಪದ್ಮಶಕ್ತಿಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (23)

 ದಿವ್ಯ ಫಲಗಳು ದಿವ್ಯ ಅಸ್ತ್ರಗಳು
ದಿವ್ಯ ಪುರುಷರುಧೀರ ಮಾತೆಯರು
 ದಿವ್ಯ ಲೋಕಗಳು ದಿವ್ಯ ಶಕ್ತಿಗಳು 
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು  (24)

 ಶ್ರೀ ವಿಘ್ನೇಶ್ವರ ಕುಮಾರಸ್ವಾಮಿಯು
 ಜ್ಞಾನಮುಕ್ತಿ ಏಕಾಂತ ಭವನಗಳು
 ಮಣಿ ನಿರ್ಮಿತದ ಸಾಲುಮಂಟಪಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (25)

 ಚಿಂತಾಮಣಿಗಳು ನವರತ್ನಗಳು
ಶತಶತ ಕೋಟಿ ವಜ್ರ ರಾಶಿಗಳು
 ವಸಂತವನಗಳು ಗರುಡ ಪಕ್ಷಿಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (26)

 ಪಂಚಭೂತಗಳು ಅಧಿಪತ್ಯಗಳು
ಹವಳಲಂಕೃತ ಅನೇಕ ಶಕ್ತಿಗಳು
ಸಂತಾನ ವೃಕ್ಷ ಸಮುದಾಯಗಳು
ಈ ಮಣಿದ್ವೀಪಕೆ ಮಹಾ ನಿಧಿಗಳು (27)

ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವಿಪವು
ದೇವದೇವರ ನಿವಾಸವು
ಇದುವೇ ನಮ್ಮ ಕೈವಲ್ಯವು (28)

 ದುಃಖವನರಿಯದ ದೇವಸೇನೆಯು
 ನೃತ್ಯ ನಾಟಕ ಸಂಗೀತಗಳು
 ಧನಕನಕಗಳು ಪುರುಷಾರ್ಥಗಳು
ಈ ಮಣಿ ದ್ವಿಪಕ್ಕೆ ಮಹಾನಿಧಿಗಳು (29)

 14 ಲೋಕದ ಮೇಲಿಹುದೊಂದು
ಸರ್ವ ಲೋಕವೆಂಬ ಲೋಕವಿಹುದು
ಸರ್ವ ಲೋಕವೇ ಈ ಮಣಿ ದ್ವಿಪವು
ಸರ್ವೇಶ್ವರಿಗೆದು ಶಾಶ್ವತ ನೆಲೆಯು (30)

 ಚಿಂತಾಮಣಿಗಳ ಮಂದಿರದಲ್ಲಿ
ಪಂಚಬ್ರಹ್ಮರ ಮಂಚದ ಮೇಲೆ
ಪರಮೇಶ್ವರ ಪರಮೇಶ್ವರಿಯೋಡನೆ
ನೆಲೆಯಾಗಿಹನು ಮಣಿ ದ್ವೀಪದಲ್ಲಿ (31)

 ಮಣಿಗಣ ಖಚಿತ ಆಭರಣಗಳು
 ಚಿಂತಾಮಣಿ ಪರಮೇಶ್ವರಿ ಧರಿಸಿ
 ಸೌಂದರ್ಯಕ್ಕೆ ಅತಿ ಸೌಂದರ್ಯದಲಿ
 ಮೆರೆಯುತಲಿಹಳು ಮಣಿ ದ್ವೀಪದಲ್ಲಿ (32)

 ಪರಮೇಶ್ವರಿಯನು ನಿತ್ಯವು ಸ್ಮರಿಸಿ
ತನುಮನದಿಂದ ಅರ್ಚಿಸಿದವಗೆ
 ಅಪಾರ ಸಂಪತ್ತು ಐಸಿರಿ ಇತ್ತು
 ಮಣಿ ದ್ವೀಪೇಶ್ವರಿ ಹರಸುವಳೆಮ್ಮನು (33)

 ನೂತನ ಗೃಹಗಳು ನಿರ್ಮಿಸಿದವರು
ಮಣಿ ದ್ವೀಪ ವರ್ಣನೆ 9 ಬಾರಿ
 ಪಠಣೆ ಮಾಡಲು ಎಲ್ಲಾ ಶುಭವು
ಅಷ್ಟ ಸಂಪದದಿ ಮೆರೆದಾಡುವರು (34)

ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವಿಪವು
ದೇವದೇವರ ನಿವಾಸವು
ಇದುವೇ ನಮ್ಮ ಕೈವಲ್ಯವು (35)

 ಶಿವಕಾಮೇಶ್ವರ ಶ್ರೀ ಚಕ್ರೇಶ್ವರ
 ಮಣಿ ದ್ವಿಪವರ್ಣನೆ ಹಾಡಿದ ಸ್ಥಳದಲ್ಲಿ
 ಭದ್ರಾಸನದಲ್ಲಿ ಕೂರುವಳಂತೆ
ಕೋಟಿ ಶುಭ ಗಳನ್ನು ನೀಡುವಳಂತೆ (36)

 ಪದ್ಮರಾಗಮಣಿ ಉಯ್ಯಾಲೆಯಲಿ
ಶ್ರೀಮಾತೆಯಾಗಿ ಕೂತಿಹಳಮ್ಮ
 ಈ ಮಣಿ ದ್ವಿಪಕ್ಕೆ ಅಧಿಪತಿಯಾಗಿ
ಜಗವನ್ನೆಲ್ಲಾ ಪಾಲಿಪಳಮ್ಮ (37)

 ಈ ಮಣಿ ದ್ವಿಪಕ್ಕೆ ಕಾಂತಿಗಳು
ಸೂರ್ಯ ಚಂದಿರ ತಾರೆಗಳು
ಲಕ್ಷ್ಮಿ ಪಾರ್ವತಿ ಸರಸ್ವತಿಯರು
ತ್ರಿಜ್ಯೋತಿಯಾಗಿ ಬೆಳಗಿದರು (38)


ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ
ಉದಿಸಿತು ಈ ಮಣಿದ್ವಿಪವು
ದೇವದೇವರ ನಿವಾಸವು
ಇದುವೇ ನಮ್ಮ ಕೈವಲ್ಯವು (39)





















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Pls do not enter any spam link in the coment box