ನಮಸ್ಕಾರ ಗೆಳೆಯರೇ, ಜೀವನದಲ್ಲಿ ಪ್ರತಿ ದಿನವೂ ನಾವು ಕಲಿಯುವುದು ಸಾಕಷ್ಟು ಇದೆ ಸಾಕಷ್ಟು ಇದ್ದರೂ ಕೂಡ ಕೆಲವೊಮ್ಮೆ ಕೆಲವು ಪರಿಸ್ಥಿತಿಗಳಲ್ಲಿ ಕೆಲವು ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದೇ ತಿಳಿಯುವುದಿಲ್ಲ ಅದಕ್ಕಾಗಿ ಅರ್ಥಶಾಸ್ತ್ರಜ್ಞರಾದ ಚಾಣಕ್ಯರ ಕೆಲವು ನೀತಿಗಳು ನಮ್ಮ ಜೀವನವನ್ನು ಬದಲಾಯಿಸುತ್ತೆ ಅಂತ ಪರಿಸ್ಥಿತಿಯಲ್ಲಿ ಚಾಣಕ್ಯ ನೀತಿಯನ್ನ ಒಮ್ಮೆ ನೆನಪು ಮಾಡಿಕೊಂಡರೆ ಸಾಕು ಆ ಸಮಸ್ಯೆಗೆ ಪರಿಹಾರ ಸಿಗುವುದು ಶತಸಿದ್ಧ. ಅಂತಹ ಕೆಲವು ಮಾತುಗಳನ್ನು ನಾನು ನಿಮಗೆ ತಿಳಿಸುತ್ತೇನೆ
1) ಅವಶ್ಯಕತೆಗಿಂತ ಅಧಿಕವಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆ ಇಲ್ಲ, ಅತಿಯಾಗಿ ಪ್ರಾಮಾಣಿಕರಾಗಿರುವುದು ಆರೋಗ್ಯಕರವಲ್ಲ,ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ.
2) ದುಷ್ಟ ವ್ಯಕ್ತಿಗಳ ಸಿಹಿ ಮಾತುಗಳ ಮೇಲೆ ತಪ್ಪಿಯು ವಿಶ್ವಾಸ ಬಿಡಬಾರದು ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಮರೆತಿರುವುದಿಲ್ಲ ಹುಲಿ ಹಿಂಸೆ ಮಾಡುವುದನ್ನು ಯಾವತ್ತೂ ಬಿಡುವುದಿಲ್ಲ
3) ಯಾವಾಗಲೂ ಗುಣವಂತನ ಜೊತೆ ಗೆಳೆತನ ಬೆಳೆಸುವುದು ಶ್ರೇಯಸ್ಸು ಕರ ಯಾಕೆಂದರೆ ಹಾಲಲ್ಲಿ ನೀರು ಹಾಲಾಗುವಂತೆ ನಾವು ಗುಣವಂತರ ಜೊತೆ ಸೇರಿ ಗುಣವಂತರಾಗುತ್ತೇವೆ
4) ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖ ದುಃಖಗಳ ಬಗ್ಗೆ ಕಿಂಚಿತ್ತು ಕಾಳಜಿ ಇರುವುದಿಲ್ಲ ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ
5) ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶಾ ಸಾಕು ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು ದೊಡ್ಡ ಪರ್ವತವನ್ನು ಪುಡಿ ಮಾಡಲು ಒಂದು ಸಿಡಿಲು ಬಡಿತ ಸಾಕು. ನಿಮ್ಮ ದೇಹ ಆಕಾರಗಾತ್ರ ಸೌಂದರ್ಯ ಮುಖ್ಯವಲ್ಲ ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಮಾತ್ರ ಮುಖ್ಯ
6) ಶಿಕ್ಷಣವನ್ನು ಪಡೆಯುವುದು ಒಂದು ತಪಸ್ ಇದ್ದಂತೆ ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗ ಮಾಡಬೇಕಾಗುತ್ತದೆ
#chanakya
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Pls do not enter any spam link in the coment box